ಅವಶ್ಯಕತೆ ಮತ್ತು ಕಾನೂನು

“ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು, ಕಾರಣ, ರೈತರ ಅಥವಾ ಅಪರಾಧ ಆಯ್ಕೆಯಾಗಿರದೆ ಅನಿವಾರ್ಯ- ವಾಗಿರುತ್ತಾದ್ದರಿಂದ. ”
= ಬ್ಲೇಸ್ ಷಾಸಲ್

Legem non necessitas ಎಂದರೆ Necessity know no law.  ಸೆಂಟ್ ಅಗಸ್ಟಿನ್ ಹೇಳಿದ ಈ “ಅವಶ್ಯಕತೆ ಯಾವ ಕಾನೂನನ್ನೂ ಗೌರವಿಸುವುದಿಲ್ಲ” ಎನ್ನುವುದು ಜನಪ್ರಿಯವಾದ ಒಂದು ನಾಣ್ಣುಡಿ. ಈ ವಿಷಯಕ್ಕೆ ಪ್ರವೇಶಮಾಡುವ ಮುನ್ನ “ಅವಶ್ಯಕತೆ” ಎನ್ನುವ ಪದದ ಸ್ಪಷ್ಟವಾದ ನಿಲುವಿನ ಅರ್ಥ ಮಾಡಿಕೊಳ್ಳುವುದು ಸೂಕ್ತ; ಅಷ್ಟೇ ಅಲ್ಲ ಅದರ ಸಿದ್ಧಾಂತವನ್ನೂ ಕೂಡ. ಕನ್ನಡ ಸಾಹಿತ್ಯ ಪರಿಷತ್ತಿನ  ಕನ್ನಡ ನಿಘಂಟುವಿನಲ್ಲಿ “ಅವಶ್ಯ’ ಎಂದರೆ:- (೧) ಹಿಡಿತಕ್ಕೆಸಿಕ್ಕದ, (೨) ವಶಕ್ಕೆ ನಿಲುಕದ, (೩) ತಪ್ಪಿಸಲಾಗದ (೪) ಅನಿವಾರ್ಯವಾದ, (೫) ತನ್ನ ಅಧೀನದಲ್ಲಿ
ತಾನಿಲ್ಲದ ಎಂಬಿತ್ಯಾದಿ ಅರ್ಥಗಳಿವೆ.
ವೆಬ್‌ಸ್ಟರನ ನಿಘಂಟಿನಲ್ಲಿ:-
(೧) ಸಾವು ಬದುಕಿನ ಅವಶ್ಯಕತೆಯಂತೆ-ನೈಸರ್ಗಿಕ ನಿಯಮದ ಫಲ.
(೨) ಬದುಕು ನೀರಿನ ಅವಶ್ಯಕತೆಯಂತೆ-ವಿನಾಯಿತಿಗೆ ದೂರವಾದ ಅಥವಾ ವರ್ಜಿಸಲಸಾಧ್ಯವಾದ:
(೩) ಮಾಡಲೇಬೇಕಾದ (೪) ಬೇರ್ಪಡಿಸಲಾಗದಂತೆ ಸಂಧರ್ಭದೊಡನೆ ಒಂದಾಗಿರುವ ಇತ್ಯಾದಿ
ಅರ್ಥಗಳಿವೆ.

ಇನ್ನು ಅವಶ್ಯಕತೆಯ ಸಿದ್ಧಾಂತವನ್ನು ಅವಲೋಕಿಸಿದರೆ ಅದರ ವಿವಿಧ ಸ್ವರೂಪಗಳು ಹೀಗಿವೆ:

(೧) ತಾರ್ಕಿಕ ಅವಶ್ಯಕತೆ :- ಎಂದರೆ “ಇರುವ ಸ್ಥಿತಿಗಿಂತ ಬೇರೆ ಸ್ಥಿತಿಯನ್ನು ಒಳಗೊಳ್ಳಬಹುದಾಗಿದ್ದ ಸಂಧರ್ಭವನ್ನೊಳಗೊಂಡ ಅವಶ್ಯಕತೆ.
(೨) ನೈತಿಕ ಅವಶ್ಯಕತೆ :- ಎಂದರೆ “ಒಬ್ಬನ ನೈತಿಕ ಗುಣದಿಂದ ಬರಬಹುದಾದ ಅವಶ್ಯಕತೆ!
(೩). ನೈಸರ್ಗಿಕ ಅವಶ್ಯಕತೆ(Physical Necessity)- ಎಂದರೆ “ನೈಸರ್ಗಿಕ ನಿಯಮಗಳಿಂದ ಉದ್ಭವಿಸುವ ಅವಶ್ಯಕತೆಗಳು. ಈ ಅವಶ್ಯಕತೆ ನಿಯಮಕ್ಕೆ ಒಳಪಟ್ಟದ್ದು; ನಿರಂಕುಶವಾದದ್ದಲ್ಲ.

ನಿಯಮಬದ್ಧ ಸೃಷ್ಟಿಯಲ್ಲಿ ಹುಟ್ಟಿರುವ ಅನೇಕ ಜೀವಿಗಳಲ್ಲಿ ಒಂದಾದ ಮಾನವನಿಂದ ನಿರ್ಮಿತವಾದದ್ದು ಕಾನೂನು. ಅದು ಅವನಿಂದ ಅವನಿಗಾಗಿ ಅವನೇ ಮಾಡಿಕೊಂಡದ್ದು; ತನ್ನ ಸ್ವಾರ್ಥಕ್ಕಾಗಿ. ಅಲ್ಲಿ ಬಂಧಿಯಾದದ್ದೂ ಅವನೆ. ಗಲಭೆಕಾಲದಲ್ಲಿ ಗುಂಪುಗೂಡಿ ಹೊರಗಬಾರದೆಂಬ ಪ್ರತಿಬಂಧಕಾಜ್ಞೆ ಜಾರಿ ಇದ್ದಾಗಲೂ ಮೃಗಪಕ್ಷಿಗಳು ಗುಂಪುಗುಂಪಾಗಿ ವಾಯುವಿಹಾರ ಅಥವಾ ಆಹಾರ ಅನ್ವೇಷಣೆಗೆ ಹೋಗುವುದನ್ನು ನೋಡಿದಾಗ ಪ್ರಕೃತಿಯ ನಿಯಮದೆದುರು ನಮ್ಮ ಕಾನೂನು ಎಷ್ಟು ಕೃತಕ ಹಾಗೂ ಸೀಮಿತ ಎನಿಸುತ್ತದೆ. ಕಾನೂನಿನಿಂದ ರಕ್ಷಣೆ ಪಡೆಯುವುದಕ್ಕಿಂತ ಹೆಚ್ಚಿಗೆ ಅದರ ದಬ್ಬಾಳಿಕೆಗೆ ಗುರಿಯಾಗಿ ಇಡೀ ಮಾನವ ಜನಾಂಗ ನಿರ್ವೀರ್ಯವಾಗುತ್ತ, ನಿಕೃಷ್ಟತೆಗೆ ಇಳಿದಿರುವುದನ್ನು ಕಾಣುತ್ತೇವೆ.

ಹೀಗೆ ತನ್ನ ಹಿತಸಾಧನೆಗೆ ಸೃಷ್ಟಿಸಿಕೊಂಡಿರುವ ಕಾನೂನಿನ ಒಳಗೆ ಮಾನವ ತಾನು ವಶಪಡಿಸಿಕೊಳ್ಳಲಾಗದ “ಅವಶ್ಯಕತೆಗೆ ತಾನೇ ಹೇಗೆ ಬಂಧಿಯಾಗಿದ್ದಾನೆ ಎನ್ನುವುದನ್ನು ನಾವು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕಾಗಿದೆ – ನೈಸರ್ಗಿಕವಾಗಿ ಹಾಗೆ ಬಂಧಿಯಾಗಬೇಕಾದ ಕಾರಣ ಇಲ್ಲದಿದ್ದರೂ ಸಹ.

“ಅವಶ್ಯಕತೆಗೆ ಯಾವ ಕಾನೂನಿನ ಅಡ್ಡಿಯೂ ಇಲ್ಲ” ಎನ್ನುವುದು ಪರಿಚಿತವಾದ ನಾಣ್ಣುಡಿ. ಪೂರ್ಣವಾಗಿ ತಿಳಿದೂ ಬುದ್ಧಿ ಪೂರ್ವಕ ಉದ್ದೇಶದಿಂದ ಮಾಡಿದಾಗ್ಯೂ ಆವಶ್ಯಕವಾದ ಕ್ರಿಯೆ ತಪ್ಪಾಗುವುದಿಲ್ಲ.

ಎಲ್ಲಾ ಸಾಧ್ಯತೆಯಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ ಕ್ರಿಯೆ ಮತ್ತು ಅದಕ್ಕೆ ಒಳಗಾಗಿರುವ ಕರ್ತೃವಿಗೆ ಬೇರಾವ ಮಾರ್ಗವೂ ಇಲ್ಲದಿದ್ದಾಗ ಅದನ್ನು ಪೂರ್ಣಾರ್ಥದಲ್ಲಿ ಕ್ರಿಯೆ ಎಂದು ಕರೆಯಲು ಸಾಧ್ಯವಾಗುವುದಿಲ್ಲ.

ಒಂದು ನಿರ್ದಿಷ್ಟವಾದ ಕ್ರಿಯೆಯಲ್ಲಿ ಕರ್ತೃವಿಗೆ ತನ್ನದೇ ಆದಂತಹ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಒತ್ತಾಯಪೂರ್ವಕ ಕಾರಣಗಳಿರುತ್ತವೆ. ಅಂತಹ ಸಂಧರ್ಭದ ಅವಶ್ಯಕತೆಗಳನ್ನು ವಿಶ್ಲೇಷಿಸಿದಾಗ ಅಲ್ಲಿ ಮೌಲ್ಯಗಳ ತಿಕ್ಕಾಟವಿರುವುದು ಕಂಡು ಬರುತ್ತದೆ; ಒಂದು ಕಡೆ ಕಾನೂನಿನ ನಿಯಮವನ್ನು ಪಾಲಿಸಬೇಕಾದ ಮೌಲ್ಯ; ಮತ್ತೊಂದು ಕಡೆ ನಿರ್ದಿಷ್ಟ ಸಂದರ್ಭ ಒತ್ತಾಯಿಸುವ ಅದಕ್ಕಿಂತ ಹೆಚ್ಚಿನ ಮೌಲ್ಯ. ಇಂತಹ ಸಂದರ್ಭದಲ್ಲಿ ಕಾನೂನು ಅದರ ನಿಯಮವನ್ನು ಮೀರಿ ನಡೆಯುವ ಅವಕಾಶವನ್ನು ಕೊಡುತ್ತದೆ; ಕೊಡಬೇಕು. ಉದಾಹರಣೆಗೆ ಜೀವರಕ್ಷಣೆಯ ಸಂದರ್ಭದಲ್ಲಿ ಮತ್ತೊಬ್ಬನ ಅಸ್ತಿಯನ್ನು ಹಾನಿಗೊಳಿಸಬೇಕಾಗುವುದು ಅಥವಾ ಹತ್ತಿ ಉರಿಯುತ್ತಿರುವ ಬೆಂಕಿಯಿಂದ ಪಾರಾಗಲು ವಾಸದ ಹುಲ್ಲು ಗುಡಿಸಲುಗಳನ್ನು ನಾಶಮಾಡುವುದು ಇತ್ಯಾದಿ.

ಅವಶ್ಯಕತೆಯ ಚಾಲನೆಯಲ್ಲಿ ಕಾನೂನಿನ ಶಿಕ್ಷೆಯನ್ನು ಮೀರಿದ ರಕ್ಷಣೆಯ ಮತ್ತೊಂದು ಮುಖವೆಂದರೆ ಅಂತಹ ಉದ್ದೇಶಉಳ್ಳಂತಹ ಸಂದರ್ಭ. ಅವಶ್ಯಕತೆ ಎನ್ನುವುದು- ಕಾನೂನಿನ ಶಿಕ್ಷೆಯ ಭಯ ಅಡ್ಡಿ ಪಡಿಸದಂತ ಹಕ್ಕುಳ್ಳುವಂಥದ್ದು.

ಶಿಕ್ಷೆಯು ನಿಷ್ಪ್ರಯೋಜಕವಾದ ಅವಶ್ಯಕತೆಯ ಹಕ್ಕನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಚಿತ್ರವಾದ ಉದಾಹರಣೆ ಎಂದರೆ ಆರ್ ವಿರುದ್ಧ “ಗ್ರೋಥರ್‌ (R v/s Growther):”ಒಬ್ಬರನ್ನು ಹೊರಬಲ್ಲ ಮರದ ಹಲಗೆಯನ್ನು ಮುಳುಗುತ್ತಿರುವ ಇಬ್ಬರೂ ತಬ್ಬುವುದು. ”

ಇಂತಹ ಸಂದರ್ಭದಲ್ಲಿ ತನ್ನನ್ನು ಯಾರೂ ಆಶ್ರಯಿಸದೆ ಏಕಾಂಗಿಯಾಗಿದ್ದವನು ಹಾಗೆ ಆಶ್ರಯಿಸಿರುವವನಿಗೆ ಮರದ ಹಲಗೆಯನ್ನು ಬಿಟ್ಟುಕೊಡಬೇಕೆನ್ನುವುದು ನೈತಿಕ ಹೊಣೆಯಾಗಿರಬಹುದು; ವೃದ್ಧನಾಗಿದ್ದರೆ ಯುವಕನಿಗೆ ಬಿಟ್ಟುಕೊಡ- ಬೇಕಾಗಿರುವುದು ನೈತಿಕ ಹಾಗೂ ತಾರ್ಕಿಕವಾಗಿರಬಹುದು. ಆದರೆ ಶಕ್ತಿ ಉಳ್ಳವನು ತನ್ನ ಬಲಪ್ರಯೋಗದಿಂದ – ನೈತಿಕ, ತಾರ್ಕಿಕ ಹೊಣೆಗಳೆಲ್ಲವನ್ನೂ ಮೀರಿ – ತನ್ನನ್ನು ತಾನು ಸಂರಕ್ಷಿಸಿಕೊಳ್ಳುವುದು ಅವನ ಹಕ್ಕು ; ಆದ್ದರಿಂದ
ಇಂತಹ ಸಂದರ್ಭವನ್ನು ಉದ್ಧರಿಸುವಂಥ ಕಾನೂನು ಅಪ್ರಯೋಜಕವಾಗುತ್ತದೆ.

ಅವಶ್ಯಕತೆಗೆ ಮತ್ತೊಂದು ಜನಪ್ರಿಯವಾದ ಉದಾಹರಣೆ ಬಂದರೆ “ಅರ್ ವಿರುದ್ಧ ಡ್ಯುಡ್ಲೇ” (R v/s Dudley ) : “ಒಡೆದು ಹೋದ ಹಡಗಿನ ನಾವಿಕರು ಬಹಳ ದಿನಗಳ ಮೇಲೆ ಆಹಾರವಿಲ್ಲದೆ ಕ್ಷಾಮಕ್ಕೆ ಈಡಾಗಿ – ಒಂದು ಕಡೆ ಹಸಿವಿನಿಂದ ಸಾವು; ಮತ್ತೊಂದು ಕಡೆ ಸಹ ನಾವಿಗನೊಬ್ಬನನ್ನು ಕೊಂದು ಸಜಾತಿ ಭಕ್ಷಣೆಯಿಂದ ಜೀವರಕ್ಷಣೆಯ ಸಾಧ್ಯತೆ – ಈ ಹೊಯ್ದಾಟದ ಆಯ್ಕೆಯಲ್ಲಿ ಒಬ್ಬನನ್ನು ಕೊಂದು ಬದುಕಿಬಂದಾಗ ಕಾನೂನು ಏನು ಹೇಳುತ್ತದೆ? ಕೃತ್ಯವನ್ನು ಕೊಲೆ ಎಂದೇ ತೀರ್ಮಾನಿಸಿದರೂ ಶಿಕ್ಷೆಯಲ್ಲಿ ರಿಯಾಯಿತಿಯನ್ನು ನೀಡಿತು. ” ಇದನ್ನು ವಿವರವಾಗಿ “ಒತ್ತಾಯ ಮತ್ತು ಅವಶ್ಯಕತೆಯ ಕಾನೂನು’ ಎನ್ನುವಲ್ಲಿ ವಿಲಿಯಮ್ಸ್‌ ಎಂಬುವರು ವಿಶದವಾಗಿ ಚರ್ಚಿಸಿದ್ದಾರೆ

ಅಲ್ಲದೆ ಮನುವು ತನ್ನ ಸ್ಮೃತಿಯಲ್ಲಿ ಮರಣಾಂತ ಸಂದರ್ಭದಲ್ಲಿ ಸಿಕ್ಕಿದಲ್ಲಿ ಉಣ್ಣಬಹುದು. ಕೆಸರು ಚೆಲ್ಲಿದರೆ ಆಕಾಶ ಕೊಳೆಯಾಗುವುದಿಲ್ಲ (೧೦೪), ಹಸಿವಿಗಾಗಿ ಅಜೀರ್ಗತನು ಮಗನನ್ನು ಬಲಿಗೆ ಮಾರಲು ಮುಂದಾದನು, ಅವನಿಗೆ ಪಾಪ ಬರಲಿಲ್ಲ (೧೧೫) ಧರ್ಮಾಧರ್ಮಜ್ಞಾನಿ ವಾಮದೇವನು ಹಸಿವಿನಿಂದ ಜೀವ ಉಳಿಸಲು ನಾಯಿಯ ಮಾಂಸತಿಂದೂ ಪಾಪಿಷ್ಠನಾಗಲಿಲ್ಲ. (೧೦೬). ಭರದ್ವಾಜನು ಕಾಡಿನಲ್ಲಿ ಮಕ್ಕಳೊಡನೆ ಹಸಿವಿಗಾಗಿ ಮೃದುವಿನಿಂದ ದನಗಳನ್ನು ತಕ್ಕೊಂಡನು. ಅವನು ಮಹಾ ತಪಸ್ವಿಯು (೧೦೭), ಧರ್ಮಾಧರ್ಮ ನಿಪುಣನಾದ ವಿಶ್ವಾಮಿತ್ರನು
(ಬ್ರಾಹ್ಮಣರು ವಟುವಿಗೆ ಉಪನಯನಮಾಡಿ ‘ಗೋಪ್ಯ’ ಎಂದು ಬೋಧಿಸುವ “ಗಾಯತ್ರಿ” ಮಂತ್ರದ ಕರ್ತೃ ಈ ವಿಶ್ವಾಮಿತ್ರ. ಈತ ಕ್ಷತ್ರಿಯ) ಹಸಿವಿಗೆ ನಾಯಿಕುಂಡೆ ಮಾಂಸವನ್ನು ಹೊಲೆಯನಿಂದ ತಕ್ಕೊಂಡನು (೧೦೮).” ಎಂದು ಅವಶ್ಯಕ ಸಂದರ್ಭಗಳನ್ನು ವಿವರಿಸಿದ್ದಾನೆ.

ಹಾಗೆಯೆ ದಿವ್ಯಕುರಾನಿನಲ್ಲಿ “”ಯಾವಾನಾದರೂ ಪಾಪದ ಕಡೆ ವಾಲುವವನಾಗಿರದೆ, ಹಸಿವಿನ ಪಾಪದಿಂದ ನಿರ್ಭಂಧಿತನಾಗಿ ಹರಾಮ್ ಆದುದನ್ನು ತಿಂದುಬಿಟ್ಟರೆ, ನಿಶ್ಚಿತವಾಗಿಯೂ ಅಲ್ಲಾಹನು ಬಹಳ ಹೆಚ್ಚು ಕ್ಷಮಿಸುವವನೂ ಕರುಣಾ ನಿಧಿಯೂ ಆಗಿರುತ್ತಾನೆ” ಎಂದು ಉಲ್ಲೇಖಿಸಲಾಗಿದೆ. (ಸೂರ. ೫.೩, ದಿವ್ಯಕುರಾನ್)

ಒಬ್ಬ ವ್ಯಕ್ತಿ ತನ್ನನ್ನು ನುಂಗುತ್ತಿರುವ, ಸಂಪೂರ್ಣವಾಗಿ ಆವರಿಸುತ್ತಿರುವ ಸಾವಿನ ಭಯದಿಂದಾಗಿ ಕಾನೂನು ವಿರೋಧವಾದ ಕೆಲಸಮಾಡಲು ಒತ್ತಾಯ ಬಂದಾಗ ಅಂತಹ ಸಂದರ್ಭದಲ್ಲಿ ಅವನೂ ಕಾನೂನಿನ ಕ್ಷಮೆ ಇದೆ. ಕಾರಣ, ಯಾವ ಕಾನೂನೂ ಸಹ ವ್ಯಕ್ತಿಯು ತನ್ನ ಸಂರಕ್ಷಣೆ ಮಾಡಿಕೊಳ್ಳುವುದನ್ನು ಬಿಟ್ಟುಕೊಡುವುದಿಲ್ಲ. ಅಲ್ಲದೆ ಅದು ಪ್ರಕೃತಿನಿಯಮದ ಆಂತರಿಕ ಶಕ್ತಿಯಿಂದ ಜಾಗೃತವಾಗಿ ಸಹಜಗತಿಯಲ್ಲಿ ಕ್ರಿಯಾತ್ಮಕವಾಗುತ್ತದೆ. ೨

ಇಲ್ಲಿ ಅವಶ್ಯಕತೆಯನ್ನು ಕುರಿತು ಕಾನೂನಿಗೆ ಪರೀಕ್ಷೆ ಇರುವುದು ತನ್ನ ಅಸಮರ್ಥತೆಯಲ್ಲಲ್ಲ; ಬದಲಿಗೆ ಶಿಕ್ಷೆಯ ಯುಕ್ತಾಯುಕ್ತತೆಯಲ್ಲಿ.

ಕಾನೂನಿನ ಪರಿವೆಯೆ ಇಲ್ಲದ ಉದ್ದೇಶಿತ ಕ್ರಿಯೆಗೆ ಕಾನೂನಿನ ಭಯವಿರಬೇಕು ಎಂಬುದು ನ್ಯಾಯವಾದುದು. ಆದರೆ ಶಿಕ್ಷೆಯ ಪರಿಧಿಯಲ್ಲಿ ಕಾನೂನಿಗೆ ತನ್ನದೇ ಆದ ಸೀಮಿತ ಎಲ್ಲೆ ಇರಬೇಕು. ಉದಾಹರಣೆಗೆ: ಒಂದು ಸಣ್ಣ ಕಳ್ಳತನಕ್ಕೆ ಜೀವಸಹಿತ ಸುಡಬೇಕೆನ್ನುವುದು ಶಿಕ್ಷೆ ಎನ್ನುವುದಾದರೆ ಹಸಿವಿನಿಂದ ಸಾಯುತ್ತಿರುವವನಿಗೆ ಚೂರು ರೊಟ್ಟಿ ಕದಿಯುವುದು ಸಾಧ್ಯತೆಗೆ ದೂರವಾಗುತ್ತದೆ. ಅಗ ಅವಶ್ಯಕತೆ ಎನ್ನುವ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ನಾವು ಆಸ್ತಿಗಳ ಮೇಲಿನ ಹಕ್ಕನ್ನು ಉನ್ನತ ಸ್ಥಾನದಲ್ಲಿ ಇರಿಸಲು ಸಾಧ್ಯವಾಗುವುದಿಲ್ಲ. ಹಾಗಾದ ಪಕ್ಷದಲ್ಲಿ ಕೃತ್ಯಗಳ ಉದ್ದೇಶವನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಲು ಸಾಧ್ಯತೆಗೆ ದೂರವಾಗುತ್ತದೆ. ಇಂತಹ ಸಂದರ್ಭಗಳಲ್ಲಿಯೆ ನೈತಿಕತೆ ಕಾನೂನನ್ನು ಮೀರಿ ನಿಲ್ಲುತ್ತದೆ. ಅಂತಹ ಸಂದರ್ಭಗಳನ್ನು ಮೀರಿ ನಿಲ್ಲಲಾಗದ ಶ್ರೀಸಾಮಾನ್ಯನ ದೃಷ್ಟಿಯಿಂದ ನಾವು ಇದನ್ನು ನಿಂತು ನೋಡಬೇಕಾಗುತ್ತದೆ. ಉದಾಹರಣೆಗೆ : ಜಗತ್ಪ್ರಸಿದ್ದ ಬರಹಗಾರನಾದ ವಿಕ್ಟರ್ ಹ್ಯೂಗೂನ “ಲೇ ಮಿಸರಬಲ್’ ಕಾದಂಬರಿಯ ಜೀನ್‌ವಾಲ್‌ಜೀನ್ ಹಸಿದವನು ಸಾವಿನ ದವಡೆಯಲ್ಲಿ ಸಿಕ್ಕಿದ್ದಾಗ ಅವನನ್ನು ಬದುಕಿಸುವ ಸಲುವಾಗಿ ರೊಟ್ಟಿ ಆಂಗಡಿಯಲ್ಲಿ ತುಂಡು ರೊಟ್ಟಿಯನ್ನು ಕದ್ದು ತಂದುದಕ್ಕೆ ಅವನಿಗೆ ಜೈಲಿನ ಕ್ರೂ ಶಿಕ್ಷೆ. ಹಾಗೆ ಲಂಕೇಶರ ‘ರೊಟ್ಟಿ’ ಕಥೆಯಲ್ಲಿನ ಸಂದರ್ಭಕೂಡ – ಪೋಲೀಸರ ಒದೆತ.

ಸರ್ಕಾರ ತನ್ನ ಕಾನೂನಿನ ದಬ್ಬಾಳಿಕೆಯ ಮೂಲಕ ಕಡ್ಡಾಯವಾಗಿ ಲೆವಿ ಧಾನ್ಯ ಸಂಗ್ರಹಣೆ ಮಾಡಿ ಉಗ್ರಾಣದಲ್ಲಿಟ್ಟು ಅದು ಕೊಳೆತು, ಹುಳು ಹತ್ತಿ ಗೊಬ್ಬರವಾಗುತ್ತಿರುವುದು ಒಂದು ಕಡೆ, ಹಸಿದ ಕೋಟ್ಯಾಂತರ ಹೊಟ್ಟೆಗಳ ಆರ್ತನಾದ ಮತ್ತೊಂದು ಕಡೆ ಉಗ್ರಾಣದಲ್ಲಿ ಕೊಳೆಯುತ್ತಿರುವ ಮತ್ತು ಹಸಿದ ಹೊಟ್ಟೆಗಳ ಆರ್ತನಾದದ ನಡುವೆ ಅಡ್ಡಗೋಡೆ- ಯಾಗಿರುವ ಈ ಕಾನೂನು ಏನು? ಎಂಥದು! ಏಕೆ?

ಒಟ್ಟಿನಲ್ಲಿ ಈ ಅವಶ್ಯಕತೆ ಎನ್ನುವುದು ಕಾನೂನಿನ ನಿಯಮಗಳನ್ನು ಮೀರಿದ ಉನ್ನತ ಮೌಲ್ಯವನ್ನು ಹೊಂದಿದ್ದಾಗ ಅದು ಸಮರ್ಥನೀಯವಾದದು. ಸಾಕ್ಷಿ ಪುರಾವೆಗಳಿಂದ ದೃಡೀಕರಿಸಲಸಾಧ್ಯವಾದ ಹಾಗೂ ಶಿಕ್ಷೆ ನಿರರ್ಥಕವಾದಂತ ಸಂದರ್ಭಗಳಲ್ಲಿ ಅವಶ್ಯಕತೆಯ ನ್ಯಾಯ ಗಟ್ಟಿಯಾಗಿ ನಿಲ್ಲುತ್ತದೆ.

ಸಾಮಾಜಿಕ ಅನ್ಯಾಗಳಿಂದ, ಅಂದರೆ ಅಸಮಾನತೆಯಿಂದ, ತಿನ್ನಲು ಏನೂ ಇಲ್ಲದವನು ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡರೆ ಅದು ಕೊಲೆಯೆ?’ ಎನ್ನುವ ಪ್ರಶ್ನೆಗೆ ಕಾನೂನು ಮೌನ ತಾಳುತ್ತದೆ! ಏಕೆ? ಇದು ರಾಷ್ಟದ ಜವಾಬ್ದಾರಿಯಲ್ಲವೆ? ರೊಟ್ಟಿಚೂರು ಕದ್ದವನಿಗೆ ಶಿಕ್ಷೆ ವಿಧಿಸುವ ರಾಷ್ಟ್ರ, ಕಾನೂನು, ಅದರ ಪ್ರಜೆಯೊಬ್ಬನಿಗೆ ಹಸಿವಿನಿಂದ ಉಂಟಾದ ಆತ್ಮಹತ್ಯೆಗೆ ಏನು ಹೇಳುತ್ತದೆ? ಹೇಳಬೇಕು!?

.ಇಲ್ಲೇ ಮಾನವ ನಿರ್ಮಿತ ಕಾನೂನಿನ ಅತ್ಯಂತ ಸೂಕ್ಷ್ಮತಮ ಕ್ರೌರ್ಯ ಅಡಗಿರುವುದು.

– ೧೯೮೧

————–
1 ಮನುಸ್ಮೃತಿ, ಅನುವಾದಕರು, ಚಕ್ರಕೋಡಿ ಈಶ್ವರೆಶಾಸ್ತ್ರಿ. ಅಧ್ಯಾಯ ೧೦, ಶ್ಲೋಕ ೧೦೪ ರಿಂದ ೧೦೮,
ಪುಟ ೪೫೯-೪೬೦ ಪ್ರಕಟಣೆ, ಸಮಾಜಪುಸ್ತಕಾಲಯ ಧಾರವಾಡ, ದ್ವಿತೀಯ ಮುದ್ರಣ ೧೯೬೭.

2 Nothing in the universe is contingent, but all things are conditioned to
exist and operate in a particular manner by the necessity of diverse nature.
-SPINOZA

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನ್ಯಾಯಾಂಗ -ಒಂದು ನೋಟ
Next post ಕಚ್ಚಾ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys